ಪದ್ಮಪಾಣಿ | Padmapani

K.N. Ganeshaiah
4.19
139 ratings 10 reviews
ಅಜಂತದ ಗುಹೆಗಳಲ್ಲಿರುವ ಪ್ರಪಂಚ ಪಸಿದ್ದವಾದ ಪದ್ಮಪಾಣಿಯ ಚಿತ್ರವು ಬೋದಿಸತ್ವನ ಪ್ರತಿರೂಪವಾದರೆ ಅದರಲ್ಲೇಕೆ ಹೆಣ್ಣಿನ ಸೌಂದರ್ಯ ತುಂಬಿಕೊಂಡಿದೆ? ಕೋಲಾರದ ಬಳಿಯ ಒಂದು ಹಳ್ಳಿಯ ವಂಶದ ಕುಡಿಯನ್ನು ಉಳಿಸುವ ಸಲುವಾಗಿ ಅಲ್ಲಿನ ಮೂಲದೇವತೆ ನಿಜಕ್ಕೂ ಬೆಂಕಿ ಇಲ್ಲದೆ ಹಾಲನ್ನು ಉಕ್ಕಿಸಿದಳೆ? ಒಂದು ಕಾಲದಲ್ಲಿ ಹೊಯ್ಸಳರ ಅರ್ಥಿಕ ಹಾಗೂ ಧಾರ್ಮಿಕ ಕೇಂದ್ರವಾಗಿದ್ದ ತಲಕಾಡು ನಗರ ಅಲಮೇಲಮ್ಮನ ಶಾಪದಿಂದಾಗಿಯೆ ಮರಳಿನಿಂದ ತುಂಬಿಕೊಂಡಿತೆ? ಮೈಸೂರು ಅರಸರನ್ನೂ ಅಕೆಯ ಶಾಪ ತಟ್ಟಿದ್ದು ಎಷ್ಟು ಸತ್ಯ? ಕಿತ್ತೂರು ವಂಶದ ಪಟ್ಟಿಯಲ್ಲಿ ಮುಸ್ಲಿಂ ರಾಜ ಬರಲು ಹೇಗೆ ಸಾಧ್ಯ? ಬೇಲೂರು ದೇವಾಲಯದ ಶಿಲಾಬಾಲಿಕೆಯರಿಗೆ ಶಾಂತಲೆ ಮಾದರಿಯಾಗಿದ್ದಳೆ ಎಂಬ ಪ್ರಶ್ನೆಯ ಬಗ್ಗೆ ಪಿಹೆಚ್ ಡಿ ಮಾಡುತ್ತಿದ್ದ ಮಾಧವಿ ಕಂಡುಕೊಂಡ ಸತ್ಯ ಏನು? ಸಸ್ಯಗಳಲ್ಲೂ ತಾಯಿ ಮಕ್ಕಳ ಕಲಹ ಇದೆ ಎಂದು ಪುರಾವೆ ಸಹಿತ ತೋರಿಸಿದ ಪ್ರೊಫ಼ೆಸರ್ ಅವರನ್ನು ಅದೇ ಬಗೆಯ ಸಮಸ್ಯೆ ತಮ್ಮ ಸಂಸಾರದಲ್ಲೂ ಕಾಡಲು ಕಾರಣ? ಬಂಗಾಳ ಸಮುದ್ರದಲ್ಲಿ ಭಾರತದ ನೌಕಾಪಡೆಯ ಜೊತೆ ಮಿಲಿಟರಿ ಕಸರತ್ತು ಮಾಡುತ್ತಿದ್ದ ಅಮೆರಿಕದ ಯುದ್ದ ನೌಕೆಗಳ ತಂಡ ಒಂದು ರಹಸ್ಯ ಕಾರ್ಯಾಚರಣೆಯಲ್ಲಿ ನಿರತವಾಗಿತ್ತೆ? ಬೌದ್ದ ಧರ್ಮದ ಬಿಕ್ಕುಗಳ ಜೀವನ ನಿಯಮಗಳನ್ನು ರೂಪಿಸುವಲ್ಲಿ ಬುದ್ದನ ಜೀವನವನ್ನೇ ಮಾದರಿಯಾಗಿಸಿಕೊಂಡದ್ದು ಎಷ್ಟು ಸರಿ? ಬೌದ್ದ ಮುನಿಗಳು ಸಂಸಾರ ಜೀವನವನ್ನು ಅಳವಡಿಸಿಕೊಳ್ಳುವುದು ಬುದ್ದನ ಬೋಧನೆಗೆ ತಾತ್ವಿಕವಾಗಿ ವಿರೋಧವಾಗುತ್ತದೆಯೆ? ಇಂಥಹ ಪ್ರಶ್ನೆಗಳನ್ನು ಬೌದ್ದ ಮುನಿಯೊಬ್ಬನ ಮನಸ್ಸಿನಲ್ಲಿ ನೆಟ್ಟ ಹೆಣ್ಣೊಬ್ಬಳು ಸಾಮ್ರಾಟ ಅಶೋಕನನ್ನೆ ಪೇಚಿಗೆ ಸಿಲುಕಿಸಿ ಬೌದ್ದ ಧರ್ಮದ ತಾತ್ವಿಕತೆಯನ್ನೆ ಪ್ರಶ್ನಿಸಿದ್ದಳು. ಈ ವಿವರಗಳನ್ನು ಕೊಡುವ ಕಥೆಗಳ ಸಂಕಲನ ಇದು.
Genres: Fiction
168 Pages

Community Reviews:

5 star
50 (36%)
4 star
70 (50%)
3 star
16 (12%)
2 star
2 (1%)
1 star
1 (1%)

Readers also enjoyed

Other books by K.N. Ganeshaiah

Lists with this book